Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ನಮ್ಮ ಬಗ್ಗೆ

ಸ್ವಾಗತ ಮತ್ತು ಶುಭಾಶಯಗಳು!

ಶ್ರೀ ಗುರು ಶಾಂತವೀರೇಶ್ವರ ಟೂರ‍್ಸ್ 1999 ರಲ್ಲಿಯೇ ಅಸ್ತಿತ್ವಕ್ಕೆ ಬಂದ, 2016 ರಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ನಮ್ಮ ಸಂಸ್ಥೆಯು ಸ್ಥಳೀಯ ಹಾಗೂ ವಿಶ್ವಾಸಾತ್ಮಕ, ಪ್ರಾಂತೀಯ ಹಾಗೂ ಅಖಿಲ ಭಾರತೀಯ ಸತ್ವಗಳ ಸಂಗಮವಾಗಿದ್ದು ಸಂಪ್ರದಾಯಗಳಿಂದ ಪೋಷಣೆಯನ್ನು ಪಡೆದು ಆಧುನಿಕತೆಯ ಚಲನಶೀಲತೆಯನ್ನು ಮೈಗೂಡಿಸಿಕೊಂಡಿದೆ.

ಭಾರತ ಮಾತ್ರವಲ್ಲದೇ ವಿದೇಶಿ ಪ್ರವಾಸಗಳನ್ನು ಆಯೋಜಿಸುತ್ತಾ ಬಂದಿದ್ದು, ಪ್ರವಾಸಿಗರ ಬಗ್ಗೆ ಅಪಾರವಾದ ಮತ್ತು ಆಳವಾದ ಬದ್ಧತೆಯನ್ನು ಅವರ ಬಗ್ಗೆ ಕಾಳಜಿಯನ್ನು ನಮ್ಮ ಸಂಸ್ಥೆ ಹೊಂದಿದೆ ಎಂದು ಹೇಳಲು ಅತ್ಯಂತ ಸಂತೋಷವಾಗುತ್ತದೆ.

ಪುಸ್ತಕಗಳನ್ನು ಓದುವುದರಿಂದ ನಾವು ಪಡೆಯುವ ಜ್ಞಾನಕ್ಕಿಂತ ಹೆಚ್ಚಿನ ಜ್ಞಾನ ಪ್ರವಾಸ ಹೋಗಿ ಬರುವುದರಿಂದ ನಮಗೆ ಲಭಿಸುತ್ತದೆ. ಪ್ರವಾಸವು ಜ್ಞಾನ ಹಾಗೂ ಕೌಶಲ್ಯಗಳನ್ನು ಹೆಚ್ಚಿಸುವ ಅತ್ಯುತ್ತಮ ಸಾಧನವಾಗಿದೆ. ಎಸ್. ಜಿ. ಎಸ್. ಟೂರ‍್ಸ್ ನಿಂದ ಪ್ರವಾಸದ ಪ್ಯಾಕೇಜ್ ಗಳನ್ನು ಮತ್ತು ಸುಲಭ ಕಂತುಗಳ ಮೂಲಕ ಪ್ರವಾಸಿಗರು ಹಣವನ್ನು ಪಾವತಿಸಿ ಪ್ರವಾಸ ಕೈಗೊಳ್ಳಲು ಅನುಕೂಲವಾಗಲು ಹೊಸ ರೀತಿಯ ಸ್ಕೀಮ್ ಅನ್ನು ಪರಿಚಯಿಸಲಾಗಿದೆ.

ನಾವು ಆಯೋಜಿಸುವ ಪ್ರವಾಸದಲ್ಲಿ ದೇಶದ ಪೂರ್ವ ಭಾಗದಲ್ಲಿರುವ ವಿಶ್ವ ವಿಖ್ಯಾತ ಪುರಿ ಜಗನ್ನಾಥ – ಕೋನಾರ್ಕ್ – ಭುವನೇಶ್ವರ – ಕಲ್ಕತ್ತಾ ದೇವಾಲಯಗಳನ್ನು, ಪಶ್ಚಿಮ ಭಾಗದಲ್ಲಿರುವ ಹೆಸರಾಂತ ಗುಜರಾತ್ – ರಾಜಸ್ಥಾನ್ – ಸೋಮನಾಥ – ನಾಗೇಶ್ವರ ಜ್ಯೋತಿರ್ಲಿಂಗ – ಅಹಮದಾಬಾದ್ – ಜೈಪುರದಲ್ಲಿರುವ ದೇವಸ್ಥಾನಗಳನ್ನು,

ಉತ್ತರ ಭಾರತದಲ್ಲಿರುವ ( ಉತ್ತರಾಖಂಡ್) ಹರಿದ್ವಾರ – ಋಷಿಕೇಶ – ಯಮುನೋತ್ರಿ – ಕೇದಾರನಾಥ ( ಚಾರ್ ಧಾಮ್ ) – ಬದ್ರಿನಾಥ – ದೆಹಲಿ – ಅಮೃತ್ ಸರ – ವಾಘ ಬಾರ್ಡರ್ – ಮಾತಾ ವೈಷ್ಣೋದೇವಿ ದೇವಾಲಯಗಳನ್ನು ಹಾಗೂ ಚಂಡಿಗರ್ – ಆಗ್ರಾ – ಮಥುರಾ – ಕುಲುಮನಾಲಿ – ಚಾಮುಂಡಾ – ಕಾಂಗ್ರಾ – ಜ್ವಾಲಾಜಿ ಪವಿತ್ರ ಸ್ಥಳಗಳನ್ನು ಹಾಗೂ ದಕ್ಷಿಣ ಭಾರತದ ಕನ್ಯಾಕುಮಾರಿ – ಮಧುರೈ – ತ್ರಿಪುರಕೊಂಡ್ರಾ – ಸಚಿಂದ್ರಂ – ತಿರುಚೆಂದೂರು – ರಾಮೇಶ್ವರಂ – ಪಳಿಯಾರ್ ಪಟ್ಟಿ – ಶ್ರೀರಂಗಂ – ಸಮಯಪುರಂ – ಜಂಬುಕೇಶ್ವರ ದೇವಸ್ಥಾನಗಳನ್ನು ಹಾಗೂ ಮಧ್ಯ ಪ್ರದೇಶದಲ್ಲಿರುವ ಉಜೈನಿ-ಓಂಕಾರೇಶ್ವರ-ಮಹಾಕಾಳೇಶ್ವರ-ಸೋಮನಾಥ ಜ್ಯೋತಿರ್ಲಿಂಗ-ಅಹಮದಾಬಾದ್, ಬೆಟ್ ದ್ವಾರಕಾ-ಉದಯಪುರ-ಸ್ಟಾಚ್ಯು ಆಫ್ ಲಿಬರ್ಟಿ-ಮೌಂಟ ಅಬು ಇನ್ನೂ ವಿವಿಧ ಸ್ಥಳಗಳಲ್ಲಿರುವ ಪವಿತ್ರ ಹಿಂದೂ ದೇವಾಲಯಗಳನ್ನು ವೀಕ್ಷಿಸಲು ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಿಬರುವುದೇ ಪವಿತ್ರ ಕಾರ್ಯವೆಂದು ನಾವು ಭಾವಿಸುತ್ತೇವೆ. 

ವಿದೇಶ ಪ್ರವಾಸದಲ್ಲಿ ಸಿಂಗಪುರ್, ಮಲೇಷಿಯಾ, ಬ್ಯಾಂಕಾಕ್ ಮತ್ತು ದುಬೈ ದೇಶಗಳಿಗೂ ಪ್ರವಾಸ ಏರ್ಪಡಿಸಲಾ ಕಣ್ಮನ ಸೇಳೆಯುವ ನೈಸರ್ಗಿಕ ಸೌಂದರ್ಯಗಳನ್ನು ವೀಕ್ಷಣೆ ಮಾಡುವುದರಿಂದ ನಮಗೆ ಆಪಾರ ಆನಂದ ಅನುಭವ ಸಿಕ್ಕುತ್ತದೆ. ಮನಸ್ಸಿನ ಆಯಾಸ ದೂರವಾಗುತ್ತದೆ. ವಿವಿಧ ಸ್ಥಳಗಳಿಗೆ ಪ್ರಯಾಣಿಸುವುದರಿಂದ ಪ್ರವಾಸಿಗರಿಗೆ ಮಾನಸಿಕ ತೃಪ್ತಿ ಉಂಟಾಗಿದೆ. ಪ್ರವಾಸ ಸಮಯದಲ್ಲಿ ಆನೇಕ ಜನರ ಪರಿಚಯವಾಗುವುದಲ್ಲದೆ ಪ್ರಬುದ್ವತೆಯನ್ನು ತಿಳಿಸುತ್ತದೆ. ಪ್ರವಾಸದಿಂದಾಗುವ ಪ್ರಾಯೋಗಿಕ ಅನುಭವ ಅದ್ಭುತವಾಗಿರುತ್ತದೆ. ಪ್ರವಾಸ ಇದೊಂದು ರೋಚಕ ಮತ್ತು ಅವಿಸ್ಮರಣೀಯ ಅನುಭವ.

ಪ್ರವಾಸವು ಮಾನವ ಜೀವನದ ಎಲ್ಲಾ ಅಂಶಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಪ್ರವಾಸಿಗರಲ್ಲಿ ಅಡಗಿರುವ ಸೂಪ್ತವಾದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೊಸ ಹೊಸ ಜನರ ಪರಸ್ಪರ ಪರಿಚಯವಾಗಲು ಸಹಕಾರಿಯಾಗಿದೆ. ಬಹಳ ಮುಖ್ಯವಾಗಿ ಪ್ರವಾಸವು ಆರೋಗ್ಯ ಮತ್ತು ಮನಸ್ಸನ್ನು ಅಹ್ಲಾದಕರವಾಗಿಸುತ್ತದೆ. ನಮ್ಮ ಎಲ್ಲಾ ಉದ್ವೇಗ ಮತ್ತು ಆತಂಕವನ್ನು ನಿವಾರಿಸುವಲ್ಲಿ ಪ್ರವಾಸವು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವ ರೀತಿಯಲ್ಲಿ ಎಸ್.ಜಿ.ಎಸ್ ಟರ‍್ಸ್ 24 ವರ್ಷಗಳಿಂದ ಹಂತ ಹಂತವಾಗಿ ಪ್ರವಾಸಗಳನ್ನು ಆಯೋಜಿಸುತ್ತಾ ಬಂದಿರುವ ಜನಪರ ಸಂಸ್ಥೆಯಾಗಿ ಪ್ರವಾಸಿಗರ ಮನ್ನಣೆಗೆ ಪಾತ್ರವಾಗದೆಯೆಂದು ಹೇಳಲು ಹರ್ಷಿಸುತ್ತೇವೆ