ಸ್ವಾಗತ ಮತ್ತು ಶುಭಾಶಯಗಳು!
ಶ್ರೀ ಗುರು ಶಾಂತವೀರೇಶ್ವರ ಟೂರ‍್ಸ್ 1999 ರಲ್ಲಿಯೇ ಅಸ್ತಿತ್ವಕ್ಕೆ ಬಂದ, 2016 ರಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ನಮ್ಮ ಸಂಸ್ಥೆಯು ಸ್ಥಳೀಯ ಹಾಗೂ ವಿಶ್ವಾಸಾತ್ಮಕ, ಪ್ರಾಂತೀಯ ಹಾಗೂ ಅಖಿಲ ಭಾರತೀಯ ಸತ್ವಗಳ ಸಂಗಮವಾಗಿದ್ದು ಸಂಪ್ರದಾಯಗಳಿಂದ ಪೋಷಣೆಯನ್ನು ಪಡೆದು ಆಧುನಿಕತೆಯ ಚಲನಶೀಲತೆಯನ್ನು ಮೈಗೂಡಿಸಿಕೊಂಡಿದೆ.
ಭಾರತ ಮಾತ್ರವಲ್ಲದೇ ವಿದೇಶಿ ಪ್ರವಾಸಗಳನ್ನು ಆಯೋಜಿಸುತ್ತಾ ಬಂದಿದ್ದು, ಪ್ರವಾಸಿಗರ ಬಗ್ಗೆ ಅಪಾರವಾದ ಮತ್ತು ಆಳವಾದ ಬದ್ಧತೆಯನ್ನು ಅವರ ಬಗ್ಗೆ ಕಾಳಜಿಯನ್ನು ನಮ್ಮ ಸಂಸ್ಥೆ ಹೊಂದಿದೆ ಎಂದು ಹೇಳಲು ಅತ್ಯಂತ ಸಂತೋಷವಾಗುತ್ತದೆ.
ಪುಸ್ತಕಗಳನ್ನು ಓದುವುದರಿಂದ ನಾವು ಪಡೆಯುವ ಜ್ಞಾನಕ್ಕಿಂತ ಹೆಚ್ಚಿನ ಜ್ಞಾನ ಪ್ರವಾಸ ಹೋಗಿ ಬರುವುದರಿಂದ ನಮಗೆ ಲಭಿಸುತ್ತದೆ. ಪ್ರವಾಸವು ಜ್ಞಾನ ಹಾಗೂ ಕೌಶಲ್ಯಗಳನ್ನು ಹೆಚ್ಚಿಸುವ ಅತ್ಯುತ್ತಮ ಸಾಧನವಾಗಿದೆ. ಎಸ್. ಜಿ. ಎಸ್. ಟೂರ‍್ಸ್ ನಿಂದ ಪ್ರವಾಸದ ಪ್ಯಾಕೇಜ್ ಗಳನ್ನು ಮತ್ತು ಸುಲಭ ಕಂತುಗಳ ಮೂಲಕ ಪ್ರವಾಸಿಗರು ಹಣವನ್ನು ಪಾವತಿಸಿ ಪ್ರವಾಸ ಕೈಗೊಳ್ಳಲು ಅನುಕೂಲವಾಗಲು ಹೊಸ ರೀತಿಯ ಸ್ಕೀಮ್ ಅನ್ನು ಪರಿಚಯಿಸಲಾಗಿದೆ.