ಸಂದರ್ಶಿಸುವ ಸ್ಥಳಗಳು:
ಆಗ್ರಾ, ಮಥುರಾ, ಹರಿದ್ವಾರ, ಋಷಿಕೇಶ, ಅಮೃತ್ಸರ, ವಾಘಬಾರ್ಡರ್, ಮಾತ ವೈಷ್ಣೋದೇವಿ ದೇವಾಲಯ, ದೆಹಲಿ
ಬೆಳಿಗ್ಗೆ ವಿಮಾನದಲ್ಲಿ ವಾರಣಾಸಿಗೆ ಪ್ರಯಾಣ ಮಾಡಿ ಕಾಶಿ ವಿಶ್ವನಾಥ ಹಾಗೂ ವಿಶಾಲಾಕ್ಷಿ ಅನ್ನಪೂರ್ಣೇಶ್ವರಿ ದರ್ಶನ ಮಾಡಿ, ರಾತ್ರಿ ಗಂಗಾರತಿ ವೀಕ್ಷಣೆ ಮಾಡಿ ರಾತ್ರಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ಕಾಶಿಯಲ್ಲಿನ ಪವಿತ್ರ ಸ್ಥಳಗಳಾದ ಕವಡೆ ಮಾತಾ, ತುಳಸಿ ಮಾನಸ ಮಂದಿರ, ಬಿರ್ಲಾ ಮಂದಿರ, ಕಾಲಭೈರವ ದರ್ಶಮ ಪಡೆದು ರಾತ್ರ‍್ಲಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ಅಲಹಾಬಾದ್‌ನಲ್ಲಿ ತ್ರೀವೇಣಿ ಸಂಗಮ(ಗAಗಾ, ಯಮುನ, ಸರಸ್ವತಿ) ನದಿಯಲ್ಲಿ ಸ್ನಾನ, ನಂತರ ಹನುಮಾನ್ ಮಂದಿರ ದರ್ಶನ ನಂತರ ರಾತ್ರಿ 11.30 ಕ್ಕೆ ಅಲಹಾಬಾದ್ ಜೈಪುರ್ ಎಕ್ಸ್ಪ್ರೆಸ್ ರೈಲಿನಲ್ಲಿ ಆಗ್ರಾಗೆ ಪ್ರಯಾಣ ಮಾಡುವುದು.
ಬೆಳಿಗ್ಗೆ 6.45ಕ್ಕೆ ಆಗ್ರಾ ತಲುಪಿ ಸುಪ್ರಸಿದ್ಧ ತಾಜ್‌ಮಹಲ್ ಹಾಗೂ ಆಗ್ರಾ ಕೋಟೆ ವೀಕ್ಷಣೆ ಮಾಡಿ. ಸಂಜೆ ಮಥುರಾದಲ್ಲಿ ಶ್ರೀಕೃಷ್ಣ ಜನ್ಮಸ್ಥಳ ವೀಕ್ಷಣೆ ನಂತರ ರಾತ್ರಿ ದೆಹಲಿಯಲ್ಲಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ಬಿರ್ಲಾಮಂದಿರ, ಪಾರ್ಲಿಮೆಂಟ್ ಹೌಸ್ ರಾಜ್‌ಭವನ್ (ಹೊರನೋಟ), ಇಂದಿರಾಗಾAಧಿ ಮ್ಯೂಸಿಯಂ ಕುತುಬ್‌ಮಿನಾರ್ ರಾಜ್‌ಘಾಟ್, ಲೋಟಸ್ ಮಹಲ್ ಪ್ರಸಿದ್ದ ಅಕ್ಷರ ಧಾಮ, (ಸ್ವಾಮಿ ನಾರಾಯಣ ಮಂದಿರ) ವೀಕ್ಷಣೆ ಮಾಡಿ ನಂತರ ರಾತ್ರಿ ದೆಹಲಿಯಲ್ಲಿ ವಿಶ್ರಾಂತಿ.
ಬೆಳಿಗ್ಗೆ ಹೊರಟು ಹರಿದ್ವಾರ್ ತಲುಪಿ ನಂತರ ಋಷಿಕೇಶ್‌ದಲ್ಲಿ ರಾಮಜುಲ್ಲಾ ರಾಮೇಶ್ವರ ಮಂದಿರ ಗೀತಮಂದಿರ, ಸ್ವರ್ಗಾಶ್ರಮ ವೀಕ್ಷಣೆ ನಂತರ ರಾತ್ರಿ ಹರಿದ್ವಾರದಲ್ಲಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ರೋಫ್‌ವೇ ಮೂಲಕ ತೆರಳಿ ಮಾನಸದೇವಿ ದರ್ಶನ ಪಡೆದು ನಂತರ ಡೆಹ್ರಾಡೂನ್ ಅಮೃತ್‌ಸರ್ ಎಕ್ಸ್ಪ್ರೆಸ್ ರೈಲಿನಲ್ಲಿ ರಾತ್ರಿ ಅಮೃತ್‌ಸರ್‌ಗೆ ಪ್ರಯಾಣ ಮಾಡುವುದು.
ಬೆಳಿಗ್ಗೆ 7.30 ಕ್ಕೆ ಅಮೃತ್‌ಸರ್ ತಲುಪಿದ ನಂತರ ಗೋಲ್ಡನ್ ಟೆಂಪಲ್, ಜಲಿಯನ್ ವಾಲಾಭಾಗ್ ಮಾತಾ ವೈಷ್ಣೋದೇವಿ ದರ್ಶನ ಪಡೆದು ಸಂಜೆ ವಾಘಾ ಬಾರ್ಡರ್ (ಇಂಡಿಯಾ-ಪಾಕಿಸ್ತಾನ್ ಬಾರ್ಡರ್) ನಲ್ಲಿ ಪೆರೇಡ್ ವೀಕ್ಷಣೆ ನಂತರ ರಾತ್ರಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ಜಮ್ಮುವಿನಲ್ಲಿ ರಘುನಾಥ್ ಮಂದಿರ ವೀಕ್ಷಣೆ ನಂತರ ರಾತ್ರಿ ಕಟ್ರಾ ತಲುಪುವುದು. ನಂತರ ಕುದುರೆ ಡೋಲಿ ಹೆಲೆಕಾಪ್ಟರ್ ಅಥವಾ ಕಾಲ್ನಡಿಗೆ ಮುಖಾಂತರ ತಲುಪಿ, ಮಾತಾ ವೈಷ್ಣೋದೇವಿ ದರ್ಶನ ಪಡೆಯುವುದು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿಶ್ರಾಂತಿ ಪಡೆದು, ಮಧ್ಯಾಹ್ನ 2 ಗಂಟೆಗೆ ಬಸ್ ಮುಖಾಂತರ ಜಮ್ಮುವಿಗೆ ತೆರಳಿ ಸಂಜೆ 7.20 ಕ್ಕೆ ಡುರಂಟೊ ಎಕ್ಸ್ಪ್ರೆಸ್ ರೈಲಿನಲ್ಲಿ ದೆಹಲಿಗೆ ಪ್ರಯಾಣ ಮಾಡುವುದು.
ಬೆಳಿಗ್ಗೆ 4.20ಕ್ಕೆ ಸರಾಯ್ ರೋಹಿಲ್ಲಾ ರೈಲು ನಿಲ್ದಾಣ ತಲುಪುವುದು. ನಂತರ ಬಸ್‌ನಲ್ಲಿ ತೆರಳಿ ಕರೋಲ್ಭಾಗ್ ತಲುಪುವುದು. ಷಾಪಿಂಗ್ ಅಥವಾ ವಿಶ್ರಾಂತಿ ಪಡೆದು ಸಂಜೆ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವುದು.
There are no reviews yet.