ಸಂದರ್ಶಿಸುವ ಸ್ಥಳಗಳು:
ಕೇದಾರನಾಥ್ ಜ್ಯೋತಿರ್ಲಿಂಗ, ದೆಹಲಿ, ಹರಿದ್ವಾರ, ಋಷಿಕೇಶ, ಉತ್ತರಕಾಶಿ, ಯಮುನೋತ್ರಿ, ಗಂಗೋತ್ರಿ, ಗುಪ್ತಕಾಶಿ, ಬದ್ರಿನಾಥ್.
ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಮಾಡಿ ನಂತರ ಬಸ್ಸಿನಲ್ಲಿ ಹರಿದ್ವಾರಕ್ಕೆ ಪ್ರಯಾಣ ಮಾಡಿ ರಾತ್ರಿ ವಿಶ್ರಾಂತಿ
ಬೆಳಿಗ್ಗೆ 06.00 ಗಂಟೆಗೆ ಹೊರಟು ಹಿಮಾಲಯದ ನೈಸರ್ಗಿಕ ಪರ್ವತಗಳ ಸೌಂದರ್ಯವನ್ನು ವೀಕ್ಷಿಸುತ್ತಾ, ರಾತ್ರಿ ಗುಪ್ತಕಾಶಿಯಲ್ಲಿ ವಿಶ್ರಾಂತಿ.
ಬೆಳಿಗ್ಗೆ 05.00 ಗಂಟೆಗೆ ಕುದುರೆ, ಡೋಲಿ ಕಾಲ್ನಡಿಗೆ, ಹೆಲಿಕಾಪ್ಟರ್ ಮುಖಾಂತರ (ಇದರ ಎಲ್ಲಾ ಖರ್ಚುಗಳು ನಿಮ್ಮದಾಗಿರುತ್ತದೆ) ಹೊರಟು ಶ್ರೀ ಕೇದಾರೇಶ್ವರ (ಜ್ಯೋತಿರ್ಲಿಂಗ) ದರ್ಶನ ಮಾಡಿಕೊಂಡು ಗುಪ್ತಕಾಶಿಯಲ್ಲಿ ವಿಶ್ರಾಂತಿ .
ಗುಪ್ತಕಾಶಿಯಲ್ಲಿ ವಿಶ್ರಾಂತಿ
ಬೆಳಿಗ್ಗೆ 06.00 ಗಂಟೆಗೆ ಬಸ್ಸಿನಲ್ಲಿ ಹೊರಟು ಊಖಿಮಠ (ಕೇದಾರಪೀಠದ ಮಠ) ದರ್ಶನ ಮಾಡಿಕೊಂಡು ಹಿಮಾಲಯದ ನೈಸರ್ಗಿಕ ಪರ್ವತಗಳ ಸೌಂದರ್ಯವನ್ನು ವೀಕ್ಷಿಸುತ್ತಾ ರಾತ್ರಿ ಪಿಪ್ಪಲ್‌ಕೋಟೆಯಲ್ಲಿ ವಿಶ್ರಾಂತಿ.
ಬೆಳಿಗ್ಗೆ 05.00 ಗಂಟೆಗೆ ಬಸ್ಸಿನಲ್ಲಿ ಹೊರಟು ಬದರೀನಾಥದಲ್ಲಿರುವ ತಪ್ತಕುಂಡ, ಬಿಸಿನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿಕೊಂಡು ಬದರೀನಾರಾಯಣನ ದರ್ಶನ ಪಡೆದು ಭಾರತದ ಕಟ್ಟಕಡೆಯ ಹಳ್ಳಿ ಮಾಣಾದಲ್ಲಿ ವ್ಯಾಸಗುಹೆ, ಸರಸ್ವತಿ ನದಿಯ ಉಗಮ ಸ್ಥಾನ (ಪಾಂಡವರು ಸ್ನಾನ ಮಾಡಿದ ಸ್ಥಳ) ಭೀಮ ಬಂಡೆಯನ್ನು ನೋಡಿಕೊಂಡು ರಾತ್ರಿ ಪಿಪ್ಪಲ್‌ಕೋಟೆಯಲ್ಲಿ ವಿಶ್ರಾಂತಿ.
ಬೆಳಿಗ್ಗೆ 07.00 ಗಂಟೆಗೆ ಬಸ್ಸಿನಲ್ಲಿ ಹೊರಟು ಹಿಮಾಲಯದ ನೈಸರ್ಗಿಕ ಪರ್ವತಗಳ ಸೌಂದರ್ಯ ವೀಕ್ಷಿಸುತ್ತಾ, ಉತ್ತರಕಾಶಿಯಲ್ಲಿ ಕಾಶಿವಿಶ್ವನಾಥ, ಶಕ್ತಿ ದೇವಸ್ಥಾನ ದರ್ಶನ ಮಾಡಿಕೊಂಡು ರಾತ್ರಿ ಉತ್ತರಕಾಶಿಯಲ್ಲಿ ವಿಶ್ರಾಂತಿ.
ಬೆಳಿಗ್ಗೆ 05.00 ಗಂಟೆಗೆ ಬಸ್ಸಿನಲ್ಲಿ ಹೊರಟು ಮಾರ್ಗಮಧ್ಯದಲ್ಲಿ ಸಿಗುವ “ಗಂಗಾನಾನಿ” ಬಿಸಿನೀರಿನ ಬುಗ್ಗೆಯಲ್ಲಿ ಸ್ನಾನಮಾಡಿ ಅಲ್ಲಿಂದ ಗಂಗೋತ್ರಿಗೆ ಪ್ರಯಾಣ ಬೆಳೆಸುವುದು, ಭಾಗೀರಥಿ ಉಗಮಸ್ಥಾನ ಹಾಗೂ ಗಂಗಾಮಾತೆ ದರ್ಶನ ಪಡೆದು ರಾತ್ರಿ ಉತ್ತರಕಾಶಿಯಲ್ಲಿ ವಿಶ್ರಾಂತಿ.
ಬೆಳಗ್ಗೆ 06.00 ಗಂಟೆಗೆ ಹೊರಟು ಹಿಮಾಲಯದ ನೈಸರ್ಗಿಕ ಪರ್ವತಗಳ ಸೌಂದರ್ಯ ವೀಕ್ಷಿಸತ್ತಾ, ರಾತ್ರಿ ಬಾರ್‌ಕೋಡ್‌ನಲ್ಲಿ ವಿಶ್ರಾಂತಿ.
ಬೆಳಗ್ಗೆ 05.00 ಗಂಟೆಗೆ ಹೊರಟು ಜಾನಕಿಚಿಟ್ಟಿ ತಲುಪಿ ನಂತರ ಯಮುನೋತ್ರಿಗೆ ಹೊರಟು ಇಲ್ಲಿ ವಾಹನ ಸೌಲಭ್ಯ ಇಲ್ಲದ ಕಾರಣ ಪ್ರಯಾಣಿಕರು ನಡೆದು ಕುದುರೆ ಇಲ್ಲವೇ ಡೋಲಿ ಮುಖಾಂತರ ಪ್ರಯಾಣಿಸಬೇಕಾಗುವುದು (ಇದರ ಎಲ್ಲಾ ಖರ್ಚುಗಳು ನಿಮ್ಮದಾಗಿರುತ್ತದೆ) ಇದು ಯಮುನಾ ನದಿಯ ಉಗಮಸ್ಥಾನವಾಗಿದೆ ಇಲ್ಲಿನ ಬಿಸಿನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿ ಯಮುನಾದೇವಿ ದರ್ಶನ ಪಡೆದು ಅಲ್ಲಿಂದ ಹೊರಟು ರಾತ್ರಿ ಬಾರ್‌ಕೋಡ್‌ನಲ್ಲಿ ವಿಶ್ರಾಂತಿ.
ಬೆಳಿಗ್ಗೆ 06.00 ಗಂಟೆಗೆ ಬಸ್ಸಿನಲ್ಲಿ ಹೊರಟು ರುದ್ರಪ್ರಯಾಗದಲ್ಲಿ ಅಲಕಾನಂದ ಹಾಗೂ ಮಂದಾಕಿನಿ ನದಿಗಳ ಸಂಗಮ ವೀಕ್ಷಣೆ ಮಾಡಿ ನಂತರ ಋಷಿಕೇಷದಲ್ಲಿ ರಾಮೇಶ್ವರ ಮಂದಿರ, ಗೀತಾಶ್ರಮ, ಸ್ವರ್ಗಾಶ್ರಮ, ರಾಮಜೂಲ ವೀಕ್ಷಣೆ ಮಾಡಿಕೊಂಡು ರಾತ್ರಿ ಹರಿದ್ವಾರದಲ್ಲಿ ವಿಶ್ರಾಂತಿ.
ಬೆಳಿಗ್ಗೆ 06.00 ಗಂಟೆಗೆ ಹರಿದ್ವಾರದಲ್ಲಿ ಹರ್‌ಕೀಪೌಡಿಯಲ್ಲಿ ಗಂಗಾಸ್ನಾನ ಮಾಡಿಕೊಂಡು ಅಲ್ಲಿಂದ ರೋಪ್‌ವೇ ಮುಖಾಂತರ ಮಾನಸಾದೇವಿ ಇನ್ನೂ ಮುಂತಾದ ದೇವಸ್ಥಾನ ದರ್ಶನ ಮಾಡಿಕೊಂಡು, ನಂತರ ದೆಹಲಿಗೆ ಪ್ರಯಾಣಿಸಿ ಪ್ರಸಿದ್ಧ ಅಕ್ಷರ ಧಾಮ, (ಸ್ವಾಮಿ ನಾರಾಯಣ ಮಂದಿರ) ವೀಕ್ಷಣೆ ನಂತರ ರಾತ್ರಿ ದೆಹಲಿಯಲ್ಲಿ ವಿಶ್ರಾಂತಿ.
ಬೆಳಿಗ್ಗೆ 06.00 ಗಂಟೆಗೆ ಬಸ್ಸಿನಲ್ಲಿ ಹೊರಟು ರಾಷ್ಟçಪತಿ ಭವನ ಪಾರ್ಲಿಮೆಂಟ್ ಹೌಸ್ (ಹೊರನೋಟ), ಬಿರ್ಲಾಮಂದಿರ, ಇಂಡಿಯಾಗೇಟ್, ಇಂದಿರಾಗಾAಧಿ ಮೆಮೋರಿಯಲ್ ಹಾಲ್, ರಾಜ್‌ಘಾಟ್, ಕುತುಬ್‌ಮಿನಾರ್ ವೀಕ್ಷಣೆ ಮಾಡಿಕೊಂಡು ನಂತರ ವಿಮಾನ ನಿಲ್ದಾಣ ತಲುಪಿ ರಾತ್ರಿ ವಿಮಾನದ ಮೂಲಕ ಬೆಂಗಳೂರು ತಲುಪುವುದು ಬೆಂಗಳೂರಿನಿAದ ತಮ್ಮ ತಮ್ಮ ಖರ್ಚಿನಲ್ಲಿ ಶಿವಮೊಗ್ಗ ತಲುಪುವುದು.
There are no reviews yet.