ಸಂದರ್ಶಿಸುವ ಸ್ಥಳಗಳು :
ಜ್ಯೋತಿರ್ಲಿಂಗ, ಮಾಹೇಶ್ವರ, ಗೃಷ್ಣೆಶ್ವರ, ನಾಗೇಶ್ವರ, ಎಲ್ಲೋರ, ನಾಸಿಕ್, ರ್ತೈಯಂಬಕೇಶ್ವರ, ಶಿರಡಿ, ಶನಿ ಸಿಂಗಾಪುರ, ಭೀಮಾಶಂಕರ
ಮಧ್ಯಾಹ್ನ 3.00 ಗಂಟೆಗೆ ಶಿವಮೊಗ್ಗದಿಂದ ಹೈಟೆಕ್ ಬಸ್ಸಿನಲ್ಲಿ ಪಂಡರಾಪುರಕ್ಕೆ ಪ್ರಯಾಣ ಮಾಡುವುದು
ಬೆಳಿಗ್ಗೆ ಪಂಡರಾಪುರದ ಪಾಂಡುರಂಗ ವಿಠಲ ಸ್ವಾಮಿ ಮತ್ತು ರುಕ್ಮಣಿ ದರ್ಶನ ಮಾಡಿದ ಉಪಹಾರ ಸೇವಿಸಿದ ನಂತರ ಸೊಲ್ಲಾಪುರಕ್ಕೆ ಪ್ರಯಾಣ ಮಾಡಿ ಶ್ರೀ ಸಿದ್ಧರಾಮೇಶ್ವರ ಸ್ವಾಮಿ ದರ್ಶನ ಮಾಡಿ ತುಳಜಾಪುರಕ್ಕೆ ಪ್ರಯಾಣಿಸಿ ಮಧ್ಯಾಹ್ನ ಊಟದ ನಂತರ ತುಳಜಾಭವಾನಿ ದರ್ಶನ ಪಡೆದು ಅಲ್ಲಿಯೇ ತುಳಜಾಪುರದಲ್ಲಿ ತಂಗುವುದು.
ಬೆಳಿಗ್ಗೆ ತುಳಜಾಪುರದಿಂದ ಹೊರಟು ಪರ್ಲಿ ವೈದ್ಯನಾಥ ಜ್ಯೋತಿರ್ಲಿಂಗ ಹಾಗೂ ಅಂಧಾನಾಗೇಶ್ವರ ಜ್ಯೋತಿರ್ಲಿಂಗ ದರ್ಶನ ಮಾಡಿದ ನಂತರ ಎಲ್ಲೋರಗೆ ಪ್ರಯಾಣ ಮಾಡಿ ನಂತರ ಎಲ್ಲೋರದಲ್ಲಿ ತಂಗುವುದು.
ಬೆಳಿಗ್ಗೆ ಘೃಷ್ಣೇಶ್ವರ ಜ್ಯೋತಿರ್ಲಿಂಗ ದರ್ಶನ, ಎಲ್ಲೋರ ಗುಹಾಂತರ ದೇವಾಲಯ ವೀಕ್ಷಣೆ ಮಾಡಿದ ನಂತರ ಔರಂಗಾಬಾದ್‌ನಲ್ಲಿ ಮಿನಿ ತಾಜ್‌ಮಹಲ್ ವೀಕ್ಷಿಸಿ ಅಲ್ಲಿಂದ ಶನಿಸಿಂಗನಾಪುರಕ್ಕೆ ಪ್ರಯಾಣಿಸಿ ಪ್ರಸಿದ್ಧ ಶನಿದೇವರ ದರ್ಶನ ಪಡೆದು ಶಿರಡಿಯಲ್ಲಿ ತಂಗುವುದು.
ಶಿರಡಿ ಸಾಯಿಬಾಬಾರ ದರ್ಶನ ಮಾಡಿ ನಂತರ ನಾಸಿಕ್‌ನಲ್ಲಿ ಸೀತಾಗುಹೆ ವೀಕ್ಷಣೆಯ ನಂತರ ರ್ತೈಯಂಬಕೇಶ್ವರ ಕಡೆ ಪ್ರಯಾಣ ಮಾಡಿ ರ್ತೈಯಂಬಕೇಶ್ವರ ಜ್ಯೋತಿರ್ಲಿಂಗ ದರ್ಶನದ ನಂತರ ತ್ರೆöÊಂಯಬಕೇಶ್ವರದಲ್ಲಿ ತಂಗುವುದು.
ಬೆಳಿಗ್ಗೆ ಭೀಮಾಶಂಕರ ಜ್ಯೋತಿರ್ಲಿಂಗಕ್ಕೆ ಪ್ರಯಾಣಿಸಿ, ಭೀಮಾಶಂಕರ ಜ್ಯೋತಿರ್ಲಿಂಗ ದರ್ಶನ ಪಡೆದು ನಾರಾಯಣಪುರ ವೀಕ್ಷಿಸಿ ನಂತರ ಬಾಲಾಜಿ ಮಂದಿರ ವೀಕ್ಷಣೆ ಮಾಡಿ ನಂತರ ಕೊಲ್ಲಾಪುರ ಕಡೆ ಪ್ರಯಾಣ ಮಾಡಿ ಕೊಲ್ಲಾಪುರದಲ್ಲಿ ತಂಗುವುದು.
ಬೆಳಿಗ್ಗೆ ಹೊರಟು ಕೊಲ್ಲಾಪುರದ ಶ್ರೀ ಮಹಾಲಕ್ಷಿö್ಮ ದೇವಿ ದರ್ಶನ ಪಡೆದು ಶಿವಮೊಗ್ಗಕ್ಕೆ ಸುರಕ್ಷಿತವಾಗಿ ಬಂದು ತಲುಪುವುದು.
There are no reviews yet.