ಸಂದರ್ಶಿಸುವ ಸ್ಥಳಗಳು:
ಅಲಹಾಬಾದ್, ಅಯೋಧ್ಯ, ಕಾಶಿ, ಗಯಾ – ಬುದ್ಧ ಗಯಾ, ಕಲ್ಕತ್ತಾ ಭುವನೇಶ್ವರಿ ಹಾಗೂ ಪುರಿ ಜಗನ್ನಾಥ.
ಬೆಳಿಗ್ಗೆ ಬೆಂಗಳೂರಿನಿಂದ ವಿಮಾನದ ಮುಖಾಂತರ ಅಲಹಾಬಾದ್ ಪ್ರಯಾಣ ಮಾಡುವುದು. ನಂತರ ತ್ರಿವೇಣಿ ಸಂಗಮ (ಗಂಗಾ–ಯಮುನಾ-ಸರಸ್ವತಿ)ದಲ್ಲಿ ಸ್ನಾನ ಮಾಡಿ ನಂತರ ಮಲಗಿರುವ ಹನುಮಾನ್ ದೇವಸ್ಥಾನ ಆನಂದ ಭವನ (ನೆಹರು ಮನೆ) ವೀಕ್ಷಣೆ ಮಾಡಿ ಕಾಶಿಗೆ ಪ್ರಯಾಣ ಮಾಡಿ ರಾತ್ರಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ದರ್ಶನ ಮಾಡಿಕೊಂಡು ಸಾಕ್ಷಿ ಗಣಪತಿ ಅನ್ನಪೂರ್ಣೇಶ್ವರಿ ವಿಶಾಲಾಕ್ಷಿ ದರ್ಶನ ಮಾಡಿಕೊಂಡು ರಾತ್ರಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಜೀಪಿನಲ್ಲಿ ಹೊರಟು ಕಾಲಭೈರವ, ತುಳಸಿ ಮಂದಿರ, ಸಂಕಟ ವಿಮೋಚನ, ದುರ್ಗಮಂದಿರ, ಬಿರ್ಲಾ ಮಂದಿರ, ಬನಾರಸ್ ವಿಶ್ವವಿದ್ಯಾಲಯ (ಹೊರನೋಟ) ಕವಡೆಮಾತಾ ಮುಂತಾದ ದೇವಸ್ಥಾನಗಳನ್ನು ನೋಡಿಕೊಂಡು ಸಂಜೆ ಬೋಟಿನಲ್ಲಿ ತೆರಳಿ ಕಾಶಿಯಲ್ಲಿರುವ ಪ್ರಸಿದ್ದ ಘಾಟ್‌ಗಳ ವೀಕ್ಷಣೆ ಮಾಡಿ, ಬೋಟಿನಲ್ಲಿಯೇ ಕುಳಿತು ಜಗತ್‌ಪ್ರಸಿದ್ದವಾದ ಮನಮೋಹಕ ಗಂಗಾರತಿ ವೀಕ್ಷಣೆ ಮಾಡಿ ರಾತ್ರಿ ಬುದ್ದಗಯಾಗೆ ಪ್ರಯಾಣ
ಬೆಳಿಗ್ಗೆ ಬುದ್ದಗಯಾಗೆ ಪ್ರಯಾಣ ಮಾಡಿದ ನಂತರ ಗಯಾದಲ್ಲಿರುವ ವಿಷ್ಣುಪಾದ ದರ್ಶನ ವೀಕ್ಷಣೆ ನಂತರ ಬುದ್ದಗಯಾಗೆ ತೆರಳಿ ಭೋದಿ ವೃಕ್ಷ, 80 ಅಡಿ ಎತ್ತರದ ಬುದ್ಧನ ದೇವಸ್ಥಾನ ಟಿಬಿಟೀಯಿನ್ ಹಾಗೂ ಚೈನೀಸ್ ದೇವಸ್ಥಾನ ವೀಕ್ಷಣೆ ಮಾಡಿ ರಾತ್ರಿ ರೈಲಿನಲ್ಲಿ ಹೌರಾಗೆ ಪ್ರಯಾಣ ಮಾಡುವುದು.
ಬೆಳಿಗ್ಗೆ ಹೌರ ತಲುಪಿದ ನಂತರ ಕೋಲ್ಕತಾ ನಗರದ ಪ್ರವಾಸಿ ಸ್ಥಳಗಳಾದ ಹೂಗ್ಲಿ ನದಿ, ಔರಾ ಬ್ರಿಡ್ಜ್ ಬೇಲೂರು ಮಠ ವೀಕ್ಷಣೆ ದಕ್ಷಿಣೇಶ್ವರ ದೇವಸ್ಥಾನ, ವಿಕ್ಟೋರಿಯಾ ಮೆಮೊರೀಯಲ್ ಕಲ್ಕತ್ತಾದಲ್ಲಿ ವಿಶ್ರಾಂತಿ
ಬೆಳಿಗ್ಗೆ ಉಪಹಾರದ ನಂತರ ಇತರೆ ಸ್ಥಳಗಳ ವೀಕ್ಷಣೆ ನಂತರ ರಾತ್ರಿ ರೈಲಿನಲ್ಲಿ ಭುವನೇಶ್ವರಕ್ಕೆ ಪ್ರಯಾಣ ಮಾಡುವುದು.
ಬೆಳಿಗ್ಗೆ ಹೊರಟು ಪುರಿಯಲ್ಲಿರುವ ಪುರಿ ಜಗನ್ನಾಥನ ದರ್ಶನ ಪಡೆದು ಕೋನಾರ್ಕ್ನಲ್ಲಿರುವ ಸೂರ್ಯ ದೇವಸ್ಥಾನ ವೀಕ್ಷಣೆ ನಂತರ ಲಿಂಗರಾಜ ದೇವಸ್ಥಾನ ದರ್ಶನ ಪಡೆದು ರಾತ್ರಿ ಭುವನೇಶ್ವರದಲ್ಲಿ ವಿಶ್ರಾಂತಿ ಪಡೆಯುವುದು.
ವಿಮಾನದ ಮುಖಾಂತರ ಭುವನೇಶ್ವರ ದಿಂದ ಬೆಂಗಳೂರಿಗೆ ಪ್ರಯಾಣ ಮಾಡುವುದು.
Excellent tour programme
Leave feedback about this