ಸಂದರ್ಶಿಸುವ ಸ್ಥಳಗಳು:
ಕಾಶಿ ಜ್ಯೋತಿರ್ಲಿಂಗ, ಪ್ರಯಾಗ್ ರಾಜ್ (ಅಲಹಾಬಾದ್), ಅಯೋಧ್ಯ, ಸೋನಾಲಿ ಬಾರ್ಡರ್ (ನೇಪಾಳ್ ಬಾರ್ಡರ್), ಕಠ್ಮಂಡು, ಮನೋಕಾಮನ, ಪೋಕ್ರಾ, ಗೋರಖ್ ಪುರ್, ಪಶುಪತಿನಾಥ
ಬೆಂಗಳೂರು ವಿಮಾನ ನಿಲ್ದಾಣದಿಂದ ಲಖನೌಗೆ ವಿಮಾನದಲ್ಲಿ ಪ್ರಯಾಣ ಮಾಡುವುದು ಲಖನೌ ತಲುಪಿ ನಂತರ ಅಯೋಧ್ಯೆಗೆ ಪ್ರಯಾಣ ಮಾಡಿ ರಾತ್ರಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ರಾಮ ಜನ್ಮ ಭೂಮಿ, ದಶರಥ ಮಹಲ್, ಸರಾಯು ನದಿ, ಹನುಮಾನ್ ಗದ್ದಿ ವೀಕ್ಷಣೆ ನಂತರ ರಾತ್ರಿ ಸೋನಾಲಿ ಬಾರ್ಡರ್‌ನಲ್ಲಿ ವಿಶ್ರಾಂತಿ ಪಡೆಯುವುದು
ಬೆಳಿಗ್ಗೆ ಲುಂಬಿನಿಗೆ ಪ್ರಯಾಣ ಮಾಡಿ ಲುಂಬಿನಿಯಲ್ಲಿರುವ ಬುದ್ಧನ ಜನ್ಮ ಸ್ಥಳ ವೀಕ್ಷಣೆ ಮಾಡಿ ಪೋಕ್ರಾದಲ್ಲಿ ರಾತ್ರಿ ವಿಶ್ರಾಂತಿ ಪಡೆಯುವುದು..
ಬೆಳಿಗ್ಗೆ ಹೊರಟು ಬಿದ್ಯಾ ಬಾಸಿನಿ, ಡೇವಿಸ್ ಫಾಲ್ಸ್, ಗುಪ್ತೇಶ್ವರ ಗುಹೆ, ಪೇವಾ ಲೇಕ್ ವೀಕ್ಷಣೆ ನಂತರ ರಾತ್ರಿ ಪೋಕ್ರಾದಲ್ಲಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ 6.00 ಗಂಟೆಗೆ ಹೊರಟು ನೈಸರ್ಗಿಕ ಪರ್ವತಗಳನ್ನು ವೀಕ್ಷಣೆ ಮಾಡುತ್ತಾ ನೇಪಾಳದ ರಾಜಧಾನಿ ಕಠ್ಮಂಡುದಲ್ಲಿ ರಾತ್ರಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ಚರ್ತುಮುಖದ ಪಶುಪತಿನಾಥನ ದರ್ಶನ ಪಡೆದು ನಂತರ ಜಲನಾರಾಯಣ, ಡೋಲೇಶ್ವರ ಶಿವನ ಶಿರೋಭಾಗ ಹಾಗೂ 127 ಅಡಿ ಶಿವನಮೂರ್ತಿ ಸಾಗ ಕ್ಷೇತ್ರ ಇನ್ನೂ ಮುಂತಾದ ಕ್ಷೇತ್ರಗಳನ್ನು ವೀಕ್ಷಣೆ ಮಾಡಿ ನಂತರ ಕಠ್ಮಂಡುವಿನಲ್ಲಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ 5.00 ಗಂಟೆಗೆ ಹೊರಟು ಮನೋಕಾಮನೆಗೆ ಪ್ರಯಾಣ ಮಾಡಿ, ರೋಪ್‌ವೇ (ಸಮುದ್ರಮಟ್ಟಕ್ಕಿಂತ 1300 ಅಡಿ ಎತ್ತರ) ಮುಖಾಂತರ ಮನೋಕಾಮನ ದೇವಿ ದರ್ಶನ ಪಡೆದು ರಾತ್ರಿ ಸೋನಾಲಿ ಬಾರ್ಡ್ರ್‌ನಲ್ಲಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ಗೊರಖ್‌ಪುರ ತಲುಪಿ, ಗೋರಖ್‌ನಾಥ್ ಮಂದಿರ, ವೀಕ್ಷಣೆ ಮಾಡಿ ನಂತರ ವಾರಣಾಸಿಗೆ ಪ್ರಯಾಣ ಮಾಡಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ದರ್ಶನ ಪಡೆದು, ಸಾಕ್ಷಿ ಗಣಪತಿ ಅನ್ನಪೂರ್ಣ, ಕಾಶಿ ವಿಶಾಲಾಕ್ಷಿ ದರ್ಶನ ಪಡೆದು ನಂತರ ಉಪಹಾರ ಮಾಡಿಕೊಂಡು ಜೀಪ್‌ನಲ್ಲಿ ತೆರಳಿ ಕಾಶಿಯಲ್ಲಿರುವ ಕಾಲಭೈರವ, ಸಂಕಟ ಮೋಚನ, ಕವಡೆ ಮಾತಾ, ತುಳಸಿ ಮಾನಸ ಮಂದಿರ, ಬಿರ್ಲಾ ಮಂದಿರ, ವಾರಣಾಸಿ ವಿಶ್ವ ವಿದ್ಯಾಲಯ (ಹೊರನೋಟ) ವೀಕ್ಷಣೆ ಸಂಜೆ 4.00 ಗಂಟೆಗೆ ತೆರಳಿ ಕಾಶಿಯಲ್ಲಿರುವ ಎಲ್ಲಾ ಘಾಟ್‌ಗಳನ್ನು ನೋಡಿಕೊಂಡು ಗಂಗಾ ನದಿಯಲ್ಲಿ ಸ್ನಾನಮಾಡಿ ನಂತರ ಬೋಟಿನಲ್ಲಿ ಕುಳಿತು ಜಗತ್ ಪ್ರಸಿದ್ಧ ಗಂಗಾರತಿಯನ್ನು ನೋಡಿಕೊಂಡು ರಾತ್ರಿ ಕಾಶಿಯಲ್ಲ್ಲಿ ವಿಶ್ರಾಂತಿ.
ಬೆಳಿಗ್ಗೆ ಅಲಹಾಬಾದ್‌ಗೆ ಪ್ರಯಾಣ ಮಾಡಿ ನಂತರ ತ್ರೀವೇಣಿ ಸಂಗಮ (ಗಂಗಾ ಯಮುನ ಸರಸ್ವತಿ)ದಲ್ಲಿ ಸ್ನಾನ ನಂತರ ಮಲಗಿರುವ ಹನುಮಾನ್ ದೇವಸ್ಥಾನ ದರ್ಶನ ಆನಂದ ಭವನ(ನೆಹರು ಮನೆ) ವೀಕ್ಷಣೆ ಮಾಡಿ ರಾತ್ರಿ ಅಲಹಾಬಾದ್‌ನಲ್ಲಿ ವಿಶ್ರಾಂತಿ.
There are no reviews yet.