ಸಂದರ್ಶಿಸುವ ಸ್ಥಳಗಳು:
ಶ್ರೀಶೈಲ ಜ್ಯೋತಿರ್ಲಿಂಗ, ಮಂತ್ರಾಲಯ, ಮಹಾನಂದಿ, ಪಾತಾಳ ಗಂಗೆ, ಹೇಮರೆಡ್ಡಿ ಮಲ್ಲಮ್ಮ ದೇವಾಲಯ, ರಾಮೋಜಿ ಫಿಲಂ ಸಿಟಿ, ಹೈದ್ರಾಬಾದ್
ಶಿವಮೊಗ್ಗದಿಂದ ಸಂಜೆ 6.00 ಗಂಟೆಗೆ ಮಂತ್ರಾಲಯಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡುವುದು.
ಬೆಳಿಗ್ಗೆ 5.00 ಗಂಟೆಗೆ ಮಂತ್ರಾಲಯ ತಲುಪಿ, ತುಂಗಭದ್ರ ನದಿ ದಡದಲ್ಲಿ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಮಾಡಿದ ನಂತರ ಮಹಾನಂದಿಗೆ ತೆರಳುವುದು. ಮಹಾನಂದಿಯ ಮಹಾನಂದೇಶ್ವರ ಕೊಳದಲ್ಲಿ ಪುಣ್ಯಸ್ನಾನ ಮಾಡಿ ಶ್ರೀಶೈಲಂನಲ್ಲಿ ತಂಗುವುದು.
ಬೆಳಿಗ್ಗೆ ಜ್ಯೋತಿರ್ಲಿಂಗÀಗಳಲ್ಲಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ, ಭ್ರಮರಾಂಭ ದರ್ಶನ ಮಾಡಿ ನಂತರ ಜಗದ್ಗುರುಗಳು ಇದ್ದರೆ ಅವರ ದರ್ಶನ ಆಶೀರ್ವಾದ ಪಡೆದು ನಂತರ ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲಂ ಪೀಠದ ದರ್ಶನ ಮಾಡಿ, ರೋಪ್ ವೇ ಮುಖಾಂತರ ಪಾತಾಳಗಂಗೆ ವೀಕ್ಷಿಸುವುದು. ಅಲ್ಲಿಂದ ಹಲವಾರು ಸ್ಥಳಗಳನ್ನು ನೋಡಿ ಮಧ್ಯಾಹ್ನ ಊಟದ ನಂತರ ಹೈದ್ರಾಬಾದ್ ಕಡೆಗೆ ಪ್ರಯಾಣಿಸಿ ಹೈದ್ರಾಬಾದ್‌ನಲ್ಲಿ ತಂಗುವುದು.
ಬೆಳಿಗ್ಗೆ 7.00 ಗಂಟೆಗೆ ಹೊರಟು ಪೂರ್ಣದಿನ ರಾಮೋಜಿ ಫಿಲಂಸಿಟಿ ವೀಕ್ಷಣೆ ಮಾಡಿ ರಾತ್ರಿ ಹೈದ್ರಾಬಾದ್‌ನಲ್ಲಿ ತಂಗುವುದು.
ಬೆಳಿಗ್ಗೆ ತಿಂಡಿಯ ನಂತರ ಚಾರ್‌ಮಿನಾರ್ ವೀಕ್ಷಣೆ ಬಿರ್ಲಾ ಮಂದಿರ, ರಾಮಾನುಜಾಚಾರ್ಯರ ಪ್ರತಿಮೆ ವೀಕ್ಷಣೆ ಇನ್ನೂ ಮುಂತಾದ ಸ್ಥಳಗಳ ವೀಕ್ಷಣೆ ಮಾಡಿ ಶಾಪಿಂಗ್ ಮಾಡುವವರು ಶಾಪಿಂಗ್ ಮಾಡುವುದು ವಿಶ್ರಾಂತಿ ಪಡೆಯುವವರು ವಿಶ್ರಾಂತಿ ಪಡೆಯಬಹುದು. ಮಧ್ಯಾಹ್ನ ಊಟದ ನಂತರ ಹೈದ್ರಾಬಾದ್‌ನಿಂದ ಶಿವಮೊಗ್ಗದ ಕಡೆಗೆ ಪ್ರಯಾಣ ಮಾಡುವುದು.
There are no reviews yet.
Notifications