Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ಕಲ್ಕತ್ತಾ ಮತ್ತು ಪೂರಿ ಜಗನ್ನಾಥ ಯಾತ್ರೆ – 9 ದಿನಗಳ ಪ್ರವಾಸ

ಸಂದರ್ಶಿಸುವ ಸ್ಥಳಗಳು: 

ಅಲಹಾಬಾದ್, ಅಯೋಧ್ಯ, ಕಾಶಿ, ಗಯಾ – ಬುದ್ಧ ಗಯಾ, ಕಲ್ಕತ್ತಾ ಭುವನೇಶ್ವರಿ ಹಾಗೂ ಪುರಿ ಜಗನ್ನಾಥ.

  • ಆಸಕ್ತರು ರೂ, 15,000/- ಅಡ್ವಾನ್ಸ್ ಹಣ ಸಲ್ಲಿಸಿ ತಮ್ಮ ಸೀಟು ಕಾದಿರಿಸಿಕೊಂಡು ಬಾಕಿ ಹಣ 15 ದಿನಗಳ ಮುಂಚೆ ಪೂರ್ತಿ ಹಣ ಸಲ್ಲಿಸಿ ರಶೀದಿ ಪಡೆದುಕೊಳ್ಳಬೇಕು. ಯಾತ್ರಿಕರು ಎಲೆಕ್ಷನ್ ಐ ಡಿ/ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ತರತಕ್ಕದ್ದು
  • ನಮ್ಮ ಪ್ರವಾಸದ ಪ್ಯಾಕೇಜ್ ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣದವರೆಗೆ  ಬಸ್ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ, ರೈಲು ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ಮಾತ್ರ ಇರುತ್ತದೆ. ವಿಮಾನ ನಿಲ್ದಾಣಕ್ಕೆ ತಲುಪಿಸುವ ಬಸ್ಸಿನ ವ್ಯವಸ್ಥೆ ಬೇಕಾಗಿದ್ದÀಲ್ಲಿ ಅದರ ದರವನ್ನು ಯಾತ್ರಿಕರೇ ಭರಿಸತಕ್ಕದ್ದು.
  • ನೈಸರ್ಗಿಕ ಕಾರಣಗಳಿಂದ ಪ್ರಯಾಣ ವಿಳಂಬವಾದಲ್ಲಿ ಅಥವಾ ಸಂದರ್ಶನ ಸಮಯದಲ್ಲಿ ಯಾತ್ರಿಕರಿಂದ ವಿಳಂಬವಾಗಿ ಈ ಕಾರಣದಿಂದ ಯಾವುದಾದರೂ ಸಂದರ್ಶನ ಲಭ್ಯವಾಗದಿದ್ದಲ್ಲಿ ವ್ಯವಸ್ಥಾಪಕರು ಜವಾಬ್ದಾರರಲ್ಲ ಇದರ ಬಗ್ಗೆ ಯಾವುದೇ ದೂರು ಸಲ್ಲದು. ಪ್ರಯಾಣ ಸಮಯದಲ್ಲಿ ಇಚ್ಚಿಸಿದ ಸೀಟುಗಳಿಗೆ ಅವಕಾಶವಿರುವುದಿಲ್ಲ. ಬಸ್ಸಿನಲ್ಲಿ ಪ್ರತಿನಿತ್ಯ ಸೀಟುಗಳನ್ನು ಬದಲಾಗಿಸಲಾಗುವುದು.  ರೈಲಿನಲ್ಲಿ ಮಾತ್ರ ಕಂಪ್ಯೂಟರ್ ಮುಖಾಂತರ ಲಭ್ಯವಿರುವ ಸೀಟುಗಳನ್ನು ಕಡ್ಡಾಯವಾಗಿ ಪಡೆಯಬೇಕು.
  • ಯಾವುದೇ ಕಾರಣದಿಂದ ತಮ್ಮ ಸೀಟುಗಳನ್ನು ರದ್ದುಪಡಿಸಿದಲ್ಲಿ ಯಾವುದೇ ರಿಫಂಡ್ ಇರುವುದಿಲ್ಲ.
  • ಮೇಲ್ಕಂಡ ವಿಶೇಷ ಯಾತ್ರೆಯು ಲಾಭ-ನಷ್ಟ ರಹಿತವಾದ ಸಮಾಜಿಕ ಸ್ವಯಂ ಸೇವಾ ಕಾರ್ಯಕ್ರಮವಾಗಿದ್ದು ಯಾತ್ರಿಕರು ಹೆಚ್ಚಿನ ಸೌಲಭ್ಯ ನಿರೀಕ್ಷಿಸದೇ ಆಯೋಜಕರಿಗೆ ಸಹಕರಿಸಬೇಕಾಗಿ ವಿನಂತಿ.

 

Included/Excluded

  • ಬೆಳಿಗ್ಗೆ ಕಾಫಿ / ಟೀ ಬೆಳಗಿನ ಉಪಹಾರ, ಎರಡು ಊಟ ಮತ್ತು ರಾತ್ರಿ ತಂಗಲು ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು.
  • ಯಾತ್ರಿಕರು ಬಟ್ಟೆ, ಊಟದ ತಟ್ಟೆ / ಲೋಟ, ಬೆಡ್‌ಶೀಟ್, ಮತ್ತು ಗಾಳಿ ತಲೆದಿಂಬು, ಅಗತ್ಯ ಔಷದಿ, ಬೀಗ ಮತ್ತು ಸಣ್ಣ ಟಾರ್ಚು, ಮತ್ತು ಹೊದಿಕೆ ಶಾಲನ್ನು ತರಬೇಕು ಹೆಚ್ಚಿಗೆ ಲಗೇಜನ್ನು ತರಬಾರದು, ಎಲ್ಲಾ ಕಡೆ ಪ್ರವೇಶದರ, ದೋಣಿ, ರೀಕ್ಷಾ, ಸಣ್ಣಜೀಪುಗಳು ಇತ್ಯಾದಿ ಖರ್ಚುಗಳನ್ನು ಆಯೋಜಕರಿಂದಲೇ ಭರಿಸಲಾಗುವುದು.
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು
  • ಬೆಲೆ ಬಾಳುವ ಒಡವೆಗಳು ಮತ್ತು ಹೆಚ್ಚಿನ ಹಣ ತರಬಾರದು ಯಾವುದೇ ವಸ್ತು, ಹಣ, ಒಡವೆ, ಇತ್ಯಾದಿ ಕಳೆದು ಹೋದಲ್ಲಿ ಆಯೋಜಕರು ಜವಾಬ್ದಾರರಲ್ಲ ಎಲ್ಲಾ ಕಡೆ ಎ.ಟಿ.ಎಂ. ವ್ಯವಸ್ಥೆ ಇರುತ್ತದೆ. ಇದರ ಸೌಲಭ್ಯವನ್ನು ನಮ್ಮ ಮುಖಾಂತರ ಬಳಸಿಕೊಳ್ಳಬಹುದಾಗಿದೆ

Tour Plan

1ನೇ ದಿನ

ಬೆಳಿಗ್ಗೆ ಬೆಂಗಳೂರಿನಿಂದ ವಿಮಾನದ ಮುಖಾಂತರ ಅಲಹಾಬಾದ್ ಪ್ರಯಾಣ ಮಾಡುವುದು. ನಂತರ ತ್ರಿವೇಣಿ ಸಂಗಮ (ಗಂಗಾ–ಯಮುನಾ-ಸರಸ್ವತಿ)ದಲ್ಲಿ ಸ್ನಾನ ಮಾಡಿ ನಂತರ ಮಲಗಿರುವ ಹನುಮಾನ್ ದೇವಸ್ಥಾನ ಆನಂದ ಭವನ (ನೆಹರು ಮನೆ) ವೀಕ್ಷಣೆ ಮಾಡಿ ಕಾಶಿಗೆ ಪ್ರಯಾಣ ಮಾಡಿ ರಾತ್ರಿ ವಿಶ್ರಾಂತಿ ಪಡೆಯುವುದು.

2ನೇ ದಿನ

ಬೆಳಿಗ್ಗೆ ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ದರ್ಶನ ಮಾಡಿಕೊಂಡು ಸಾಕ್ಷಿ ಗಣಪತಿ ಅನ್ನಪೂರ್ಣೇಶ್ವರಿ ವಿಶಾಲಾಕ್ಷಿ ದರ್ಶನ ಮಾಡಿಕೊಂಡು ರಾತ್ರಿ ವಿಶ್ರಾಂತಿ ಪಡೆಯುವುದು.

3ನೇ ದಿನ

ಬೆಳಿಗ್ಗೆ ಜೀಪಿನಲ್ಲಿ ಹೊರಟು ಕಾಲಭೈರವ, ತುಳಸಿ ಮಂದಿರ, ಸಂಕಟ ವಿಮೋಚನ, ದುರ್ಗಮಂದಿರ, ಬಿರ್ಲಾ ಮಂದಿರ, ಬನಾರಸ್ ವಿಶ್ವವಿದ್ಯಾಲಯ (ಹೊರನೋಟ) ಕವಡೆಮಾತಾ ಮುಂತಾದ ದೇವಸ್ಥಾನಗಳನ್ನು ನೋಡಿಕೊಂಡು ಸಂಜೆ ಬೋಟಿನಲ್ಲಿ ತೆರಳಿ ಕಾಶಿಯಲ್ಲಿರುವ ಪ್ರಸಿದ್ದ ಘಾಟ್‌ಗಳ ವೀಕ್ಷಣೆ ಮಾಡಿ, ಬೋಟಿನಲ್ಲಿಯೇ ಕುಳಿತು ಜಗತ್‌ಪ್ರಸಿದ್ದವಾದ ಮನಮೋಹಕ ಗಂಗಾರತಿ ವೀಕ್ಷಣೆ ಮಾಡಿ ರಾತ್ರಿ ಬುದ್ದಗಯಾಗೆ ಪ್ರಯಾಣ

4ನೇ ದಿನ

ಬೆಳಿಗ್ಗೆ ಬುದ್ದಗಯಾಗೆ ಪ್ರಯಾಣ ಮಾಡಿದ ನಂತರ ಗಯಾದಲ್ಲಿರುವ ವಿಷ್ಣುಪಾದ ದರ್ಶನ ವೀಕ್ಷಣೆ ನಂತರ ಬುದ್ದಗಯಾಗೆ ತೆರಳಿ ಭೋದಿ ವೃಕ್ಷ, 80 ಅಡಿ ಎತ್ತರದ ಬುದ್ಧನ ದೇವಸ್ಥಾನ ಟಿಬಿಟೀಯಿನ್ ಹಾಗೂ ಚೈನೀಸ್ ದೇವಸ್ಥಾನ ವೀಕ್ಷಣೆ ಮಾಡಿ ರಾತ್ರಿ ರೈಲಿನಲ್ಲಿ ಹೌರಾಗೆ ಪ್ರಯಾಣ ಮಾಡುವುದು.

5ನೇ ದಿನ

ಬೆಳಿಗ್ಗೆ ಹೌರ ತಲುಪಿದ ನಂತರ ಕೋಲ್ಕತಾ ನಗರದ ಪ್ರವಾಸಿ ಸ್ಥಳಗಳಾದ ಹೂಗ್ಲಿ ನದಿ, ಔರಾ ಬ್ರಿಡ್ಜ್ ಬೇಲೂರು ಮಠ ವೀಕ್ಷಣೆ ದಕ್ಷಿಣೇಶ್ವರ ದೇವಸ್ಥಾನ, ವಿಕ್ಟೋರಿಯಾ ಮೆಮೊರೀಯಲ್ ಕಲ್ಕತ್ತಾದಲ್ಲಿ ವಿಶ್ರಾಂತಿ

6ನೇ ದಿನ

ಬೆಳಿಗ್ಗೆ ಉಪಹಾರದ ನಂತರ ಇತರೆ ಸ್ಥಳಗಳ ವೀಕ್ಷಣೆ ನಂತರ ರಾತ್ರಿ ರೈಲಿನಲ್ಲಿ ಭುವನೇಶ್ವರಕ್ಕೆ ಪ್ರಯಾಣ ಮಾಡುವುದು.

7ನೇ ದಿನ

ಬೆಳಿಗ್ಗೆ ಹೊರಟು ಪುರಿಯಲ್ಲಿರುವ ಪುರಿ ಜಗನ್ನಾಥನ ದರ್ಶನ ಪಡೆದು ಕೋನಾರ್ಕ್ನಲ್ಲಿರುವ ಸೂರ್ಯ ದೇವಸ್ಥಾನ ವೀಕ್ಷಣೆ ನಂತರ ಲಿಂಗರಾಜ ದೇವಸ್ಥಾನ ದರ್ಶನ ಪಡೆದು ರಾತ್ರಿ ಭುವನೇಶ್ವರದಲ್ಲಿ ವಿಶ್ರಾಂತಿ ಪಡೆಯುವುದು.

8ನೇ ದಿನ

ವಿಮಾನದ ಮುಖಾಂತರ ಭುವನೇಶ್ವರ ದಿಂದ ಬೆಂಗಳೂರಿಗೆ ಪ್ರಯಾಣ ಮಾಡುವುದು.

1 review for ಕಲ್ಕತ್ತಾ ಮತ್ತು ಪೂರಿ ಜಗನ್ನಾಥ ಯಾತ್ರೆ – 9 ದಿನಗಳ ಪ್ರವಾಸ

5 Star

100 %
1 review(s)

4 Star

0 %
0 review(s)

3 Star

0 %
0 review(s)

2 Star

0 %
0 review(s)

1 Star

0 %
0 review(s)

Reviewed by 01 customer(s)

  • Avatar

    Dr. R. Manjunatha

    Excellent tour programme

    16/10/2023

Leave feedback about this

Your email address will not be published.

From
41,000.00
Enquiry From
0
0.00
Available:
Total:
0
0.00