ಸಂದರ್ಶನ ಸ್ಥಳಗಳು:
ಕಾಶಿ ಜ್ಯೋತಿರ್ಲಿಂಗ, ಪ್ರಯಾಗ್ ರಾಜ್ ( ಅಲಹಾಬಾದ್), ಸೀತಾಮಡಿ, ಗಯಾ, ಬುದ್ಧ ಗಯಾ, ಅಯೋಧ್ಯ
ಸಂಜೆ 5.30 ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದ ಮೂಲಕ (6E968)ವಾರಣಾಸಿ ಗೆ ಪ್ರಯಾಣ. ನಂತರ ಅಲಹಾಬಾದ್ ತಲುಪಿ ವಿಶ್ರಾಂತಿ
ಬೆಳಿಗ್ಗೆ 7.00 ಗಂಟೆಗೆ ಅಲಹಾಬಾದ್ ತಲುಪಿ ರೂಂನಲ್ಲಿ ಫ್ರೆಶಪ್ ಆಗಿ ಉಪಹಾರ ನಂತರ ತ್ರಿವೇಣಿ ಸಂಗಮದಲ್ಲಿ (ಗಂಗಾ,ಯಮುನ, ಸರಸ್ವತಿ)ಸ್ನಾನವನ್ನು ಮಾಡಿಕೊಂಡು ಶ್ರೀರಾಮ ಮಂದಿರ ಮಲಗಿರುವ ಹನುಮಂತನ ದೇವಸ್ಥಾನ ಶಂಕರಾಚಾರ್ಯ ಪೀಠ ಆನಂದ ಭವನ ನೋಡಿಕೊಂಡು ಅಲ್ಲಿಂದ ಮಧ್ಯಾಹ್ನ ಊಟದ ನಂತರ ಸೀತಾಮಾತೆ ಭೂಮಿಗೆ ಹೋದಂತಹ ಸ್ಥಳ ಸೀತಾಮಡಿಯನ್ನು ನೋಡಿಕೊಂಡು ರಾತ್ರಿ ಊಟದ ನಂತರ ಅಯೋಧ್ಯೆಗೆ ಪ್ರಯಾಣ ಮಾಡಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ರಾಮ ಜನ್ಮ ಭೂಮಿ, ದಶರಥ ಮಹಲ್, ಸರಾಯು ನದಿ, ಹನುಮಾನ್ ಗದೆ ವೀಕ್ಷಣೆ ನಂತರ ರಾತ್ರಿ ಕಾಶಿಗೆ ಪ್ರಯಾಣ ಮಾಡಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ 7.00 ಗಂಟೆಯಿAದ ಉಪಹಾರ ನಂತರ 8.30 ಕ್ಕೆ ಜೀಪಿನಲ್ಲಿ ಹೊರಟು ಕಾಲಭೈರವ, ದುರ್ಗಾಮಂದಿರ, ಕವಡೆಮಾತಾ ತುಳಸಿ ಮಂದಿರ ಬಿರ್ಲಾ ಮಂದಿರ, ಬನಾರಸ್ ಯುನಿವರ್ಸಿಟಿ ಸಂಕಟಮೋಚನ ಹನುಮನ ಮಂದಿರ ಇನ್ನೂ ಹಲವಾರು ಸ್ಥಳಗಳನ್ನು ನೋಡಿಕೊಂಡು ಮಧ್ಯಾಹ್ನ ಊಟದ ನಂತರ 4.00 ಗಂಟೆಗೆ ಹೊರಟು ಗಂಗಾನದಿ ದಡಕ್ಕೆ ಹೋಗಿ ದೋಣಿಯಲ್ಲಿ ವಿಹಾರ ಮಾಡುತ್ತಾ ಹರಿಶ್ಚಂದ್ರಘಾಟ್, ಮಣಿಕರ್ಣಿಕಘಾಟ್, ಹನುಮಾನ್‌ಘಾಟ್, ಕೇದಾರಘಾಟ್, ಇನ್ನೂ ಹಲವಾರು ಘಾಟ್‌ಗಳನ್ನು ನೋಡಿಕೊಂಡು ಗಂಗಾ ಸ್ನಾನ ಮಾಡಿಕೊಂಡು ಅಲ್ಲಿಂದ ದೋಣಿಯಲ್ಲಿ ವಿಶ್ವಪ್ರಸಿದ್ದ ಗಂಗಾರತಿಯನ್ನು ನೋಡಿಕೊಂಡು ಕಾಶಿಯಲ್ಲಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ 3.00 ಗಂಟೆಗೆ ಹೊರಟು ಶ್ರೀ ಕಾಶಿವಿಶ್ವನಾಥ(ಜ್ಯೋತಿರ್ಲಿಂಗ) ಸಾಕ್ಷಿ ಗಣಪತಿ ವಿಶಾಲಾಕ್ಷಿ ಅನ್ನಪೂರ್ಣೇಶ್ವರಿ ಕಾಶಿ ಶನೇಶ್ವರ ದೇವಸ್ಥಾನದ ದರ್ಶನ ಮಾಡುವುದು
ಬೆಳಿಗ್ಗೆ 4.00 ಗಂಟೆಗೆ ಬುದ್ಧಗಯಾಗೆ ಪ್ರಯಾಣ ಮಾಡಿ ನಂತರ ವಿಷ್ಣುಗಯಾ, ಸೀತಾಕುಂಡ, ಮಂಗಳಾದೇವಿ, ಅಕ್ಷಯ್‌ವಟ್ ಬುದ್ಧನಿಗೆ ಜ್ಞಾನೋದಯವಾದ ಸ್ಥಳ, ಬುದ್ಧಗಯಾ, ಜಪಾನ್ ಟೆಂಪಲ್, ಇನ್ನೂ ಹಲವಾರು ಕ್ಷೇತ್ರಗಳನ್ನು ಆಟೋದಲ್ಲಿ ನೋಡಿಕೊಂಡು ಮಧ್ಯಾಹ್ನ ಊಟದ ನಂತರ ವಾರಣಾಸಿಗೆ ಪ್ರಯಾಣ ಮಾಡಿ ವಿಶ್ರಾಂತಿ ಪಡೆಯುವುದು.
ವಿಶ್ರಾಂತಿ ಮತ್ತು ಶಾಪಿಂಗ್ ನಂತರ ರಾತ್ರಿ 8.00 ಗಂಟೆಗೆ ರೈಲಿನಲ್ಲಿ ಹುಬ್ಬಳ್ಳಿಗೆ (ರೈಲು ನಂ17324) ಪ್ರಯಾಣ ಮಾಡುವುದು.
ಪೂರ್ತಿ ದಿನ ಪ್ರಯಾಣ
ಪ್ರಯಾಣ ನಂತರ ಹುಬ್ಬಳ್ಳಿಗೆ ತಲುಪುವುದು
There are no reviews yet.