ಸಂದರ್ಶಿಸುವ ಸ್ಥಳಗಳು:
ಗುರುವಾಯೂರು, ಅತ್ತಿರಪಲ್ಲಿ ಫಾಲ್ಸ್, ಆಲಪ್ಪಿ, ತಿರುವನಂತಪುರಂ, ಅನಂತ ಪದ್ಮನಾಭ ದೇವಸ್ಥಾನ, ಕೋವಲಂ ಬೀಚ್
ಸಂಜೆ 7:30ಕ್ಕೆ ಸರಿಯಾಗಿ ಸಿಂಧನೂರಿನಿಂದ ರಾಯಚೂರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡಿ ರಾಯಚೂರಿನಿಂದ ರಾತ್ರಿ 11.30ಕ್ಕೆ ಹೊರಡುವ ಬಸವ ಎಕ್ಸ್ಪ್ರೆಸ್ ರೈಲಿನಲ್ಲಿ ಮೈಸೂರಿಗೆ ಪ್ರಯಾಣಿಸಿ ರಾತ್ರಿ ಮೈಸೂರಿನ ಸುತ್ತೂರು ಮಠದಲ್ಲಿ ತಂಗುವುದು.
ಬೆಳಿಗ್ಗೆ 5.00 ಗಂಟೆಗೆ ವೈನಾಡಿಗೆ ಪ್ರಯಾಣ ಮಾಡಿ, ವೈನಾಡಲ್ಲಿ ಪುಕಲ್ ಲೇಕ್, ಎಡಕಲ್ ಗುಹೆಗಳು, ಹಾಗು ರಮಣೀಯ ಜಲಪಾತಗಳನ್ನು ವೀಕ್ಷಿಸಿದ ನಂತರ ಗುರುವಾಯೂರಿಗೆ ತೆರಳಿ ಗುರುವಾಯೂರಿನಲ್ಲಿ ತಂಗುವುದು.
ಬೆಳಿಗ್ಗೆ 5.00 ಗಂಟೆಗೆ ಗುರುವಾಯೂರಿನಲ್ಲಿ ಶ್ರೀ ಕೃಷ್ಣ ದೇವರ ದರ್ಶನ ಪಡೆದು ನಂತರ ಅಲ್ಲಿರುವ ಆನೆ ಬಿಡಾರ, ಆದಿ ಶಂಕರಚಾರ್ಯರು ಜನಿಸಿದ ಪವಿತ್ರ ಸ್ಥಳವಾದ ಕಾಲಾಡಿಯಲ್ಲಿರುವ ಶಂಕರಾಚಾರ್ಯ ಶಾರದಾ ಪೀಠವನ್ನು ವೀಕ್ಷಣೆ ಮಾಡಿದ ನಂತರ ಅತ್ತಿರಿಪಲ್ಲಿಯಲ್ಲಿರುವ ಜಲಪಾತ ವೀಕ್ಷಣೆ ಮಾಡಿದ ನಂತರ ಮುನ್ನಾರ್‌ಗೆ ತೆರಳಿ ಅಲ್ಲಿನ ಪ್ರಸಿದ್ಧ ಮುನ್ನಾರ ಫಾಲ್ಸ್ ಹಾಗು ರಮಣೀಯ ಪ್ರಕೃತಿ ಸೌಂದರ್ಯವನ್ನು ವೀಕ್ಷಣೆ ಮಾಡಿದ ನಂತರ ರಾತ್ರಿ ಮುನ್ನಾರಿನಲ್ಲಿ ತಂಗುವುದು.
ಬೆಳಿಗ್ಗೆ 6.00 ಗಂಟೆಗೆ ಮುನ್ನಾರ್‌ನಲ್ಲಿರುವ ಸುಂದರ ಗಿರಿಧಾಮಗಳು, ಸಾಲು ಸಾಲು ಹಸಿರುವ ಬೆಟ್ಟಗಳು, ಚಹಾ ತೋಟಗಳು, ವಿಶಿಷ್ಠವಾದ ಮೋಟೀಸ್ ಶೋಲಾ ಹುಲ್ಲುಗಾವಲುಗಳು ಹಾಗು ಇನ್ನೀತರೆ ಸೈಡ್ ಸೀನ್‌ಗಳ ವೀಕ್ಷಣೆ ನಂತರ ತ್ರಿವೇಂಡ್ರಂಗೆ ಪ್ರಯಾಣ ಮಾಡಿ ತ್ರಿವೇಂಡ್ರಂನಲ್ಲಿ ತಂಗುವುದು.
ಬೆಳಿಗ್ಗೆ 6.00 ಗಂಟೆಗೆ ಹೊರಟು ತಿರುವನಂತಪುರದಲ್ಲಿರುವ ಸುಪ್ರಸಿದ್ದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ, ಅರಮನೆಗಳ ವೀಕ್ಷಣೆ, ಪ್ರಾಣಿ ಸಂಗ್ರಾಹಾಲಯ, ಬೀಚ್‌ಗಳನ್ನು ವೀಕ್ಷಣೆ ಮಾಡಿ ನಂತರ ಜಗತ್ತಿನ ಅತೀ ದೊಡ್ಡ ಜಟಾಯು ಪ್ರತಿಮೆ ವೀಕ್ಷಿಸಿದ ನಂತರ ಆಲೆಪ್ಪಿಗೆ ಪ್ರಯಾಣಿಸಿ ಅಲೆಪ್ಪಿಯಲ್ಲಿ ತಂಗುವುದು.
ಬೆಳಿಗ್ಗೆ 6.00 ಗಂಟೆಗೆ ಹೊರಟು ಆಲೆಪ್ಪಿಯಲ್ಲಿ ಬೋಟಿಂಗ್ ಮಾಡಿ, ಬ್ಯಾಕ್ ವಾಟರ್, ಅಲೆಪ್ಪಿ ಹೌಸ್ ಬೋಟ್‌ಗಳ ವೀಕ್ಷಣೆ, ವೈವಿಧ್ಯಮಯ ಪಕ್ಷಿಗಳ ವೀಕ್ಷಣೆ, ಮನೋಹರವಾದ ಸರೋವರಗಳನ್ನು ವೀಕ್ಷಿಸಿ ನಂತರ ಚೂಟಾನಿಕೆರೆಗೆ ತೆರಳುವುದು. ಚೂಟಾನಿಕೆರೆಯಲ್ಲಿರುವ ಪ್ರಸಿದ್ಧ ಭಗವತಿ ದೇವಸ್ಥಾನ ವೀಕ್ಷಣೆ ನಂತರ ಕೊಚ್ಚಿನ್À ಕಡೆಗೆ ಪ್ರಯಾಣ ಮಾಡಿ, ಕೊಚ್ಚಿಯಲ್ಲಿರುವ ಪ್ಯಾಲೇಸ್‌ಗಳು, ಕೊಚ್ಚಿ ಕೋಟೆ, ಬೀಚ್‌ಗಳು, ಮೀನುಗಾರಿಕೆಯನ್ನು ವೀಕ್ಷಿಸಿದ ನಂತರ ಭಾರತದಲ್ಲಿಯೇ ಅತಿ ದೊಡ್ಡ ಲುಲು ಮಾಲ್‌ನಲ್ಲಿ ಶಾಪಿಂಗ್ ನಂತರ ಮೈಸೂರಿನ ಮೂಲಕ ಪ್ರಯಾಣಿಸಿ ಬೆಂಗಳೂರು ತಲುಪುವುದು. ಬೆಂಗಳೂರಿನಿAದ ರಾತ್ರಿ 11.00 ಗಂಟೆಗೆ ಹೊರಡುವ ರೈಲು ಗಾಡಿ ಸಂಖ್ಯೆ: 16593 ಹಜೂರ್ ಸಾಹಿಬ್ ನಾದೇಡ್ ಎಕ್ಸ್ಪ್ರೆಸ್‌ನಲ್ಲಿ ರಾಯಚೂರು ತಲುಪುವುದು.
ರಾಯಚೂರಿನಿಂದ – ಸಿಂಧನೂರಿಗೆ ಬಸ್ಸಿನಲ್ಲಿ ಪ್ರಯಾಣಿಸುವುದು. ಸಿಂಧನೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವುದು.
There are no reviews yet.